iied iied
ಮುಖ ಪುಟ
line
line
line
line
line
line
line
 
videos English video kannada video
This web is in Kannada, in case you have problems viewing it :windos Download Kannada Fonts and Set Browser Encoding to UTF8
ರೈತ ತೀರ್ಪು ೨೦೦೯ ಡಿಸೆಂಬರ್ ಮಾಹೆಯಲ್ಲಿ ಕರ್ನಾಟಕದಲ್ಲಿ ನಡೆದಿರುವ ವಿಶಿಷ್ಟ ಕಾರ್ಯಕ್ರಮ. ಈ ಕಾರ್ಯಕ್ರಮ ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ನಾಗರೀಕ ನ್ಯಾಯ ಮಂಡಳಿಗಳ ಮಾದರಿಯಲ್ಲಿ ನಡೆಯಲಿದೆ. ನಾಗರೀಕ ನ್ಯಾಯ ಮಂಡಳಿಗಳು ಪ್ರಜಾಪ್ರಭುತ್ವದ ಮುಖ್ಯವಾಹಿನಿಯ ಪ್ರಕ್ರಿಯೆಯಿಂದ ವಂಚಿತರಾಗಿರುವ, ಹಾಗೂ ದನಿಯಿಲ್ಲದ ಜನರಿಗೆ, ಪ್ರಜಾಪ್ರಭುತ್ವ ವ್ಯವಸ್ಥೆಯು ಕೈಗೆಟುಕುವಂತೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಕರ್ನಾಟಕದ ವಿವಿಧ ಪ್ರದೇಶಗಳ ರೈತರು, ರೈತ ಮಹಿಳೆಯರು, ದಲಿತರು ಮತ್ತು ಆದಿವಾಸಿಗಳನ್ನು ಒಂದೇ ವೇದಿಕೆಯ ಮೇಲೆ ತಂದು,
 
ವರ್ತಮಾನದಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನೆಗಳಿಂದ ಅವರಿಗೆ ಆಗುತ್ತಿರುವ ಲಾಭವನ್ನು ಅವರೇ ಪರಾಮರ್ಶಿಸುವಂತೆ ಮಾಡುವ ಉದ್ದೇಶವನ್ನು ರೈತ ತೀರ್ಪು ಹೊಂದಿದೆ. ಈ ಪ್ರಕ್ರಿಯೆಯು ಇತ್ತೀಚಿನ ವರ್ಷಗಳಲ್ಲಿ, ಕೃಷಿ ಸಂಶೋಧನೆಗಳು ಹಿಡಿಯುತ್ತಿರುವ ಹೊಸ ಜಾಡು, ಸಣ್ಣ ಮತ್ತು ಅತಿ ಸಣ್ಣ ರೈತರ ದೃಷ್ಟಿಯಿಂದ ಎಷ್ಟು ಪ್ರಸ್ತುತ ಎಂಬುದನ್ನು ಚರ್ಚೆಗೆ ಮತ್ತು ವಿಶ್ಲೇಷಣೆಗೆ ಒಡ್ಡಲಿದೆ. ಹಾಗಾಗಿ ಸಾಮಯಿಕ ಕೃಷಿ ಸಂಶೋಧನೆಯ ನಿಲುವಿನ ಬಗ್ಗೆ ಪ್ರಪಂಚದಲ್ಲೇ ನಡೆಯುತ್ತಿರುವ ಮೊಟ್ಟ ಮೊದಲ ರೈತ ತೀರ್ಪು ಇದಾಗಿದೆ.
 
 
ರೈತ ತೀರ್ಪು ವರದಿ
ಡೌನ್‌ಲೋಡ್
Raita Teerpu Report Kannada
 
 
ರೈತತೀರ್ಪು ಡೌನ್‌ಲೋಡ್
 
ಪತ್ರಿಕಾ ಪ್ರಕಟಣೆ 5 / 12 / 2009
 
     

 

 
ಹಿನ್ನೆಲೆ  

೯೦ ರ ದಶಕದಲ್ಲಿ ಪ್ರಚಾರಕ್ಕೆ ಬಂದ "ಆಹಾರ ಭದ್ರತೆ" ಕಲ್ಪನೆಯ ಬದಲಿಗೆ "ಆಹಾರ ಸಾರ್ವಭೌಮತ್ವ"ದ ಕಲ್ಪನೆಯನ್ನು ನಾಗರೀಕ ಸಂಘಟನೆಗಳು, ಅಂತಾರಾಷ್ಟ್ರೀಯ ರೈತ ಹೋರಾಟಗಳು ಇತ್ತೀಚಿನ ವರ್ಷಗಳಲ್ಲಿ ಎತ್ತಿ ಹಿಡಿದಿವೆ. "ಆಹಾರ ಸಾರ್ವಭೌಮತ್ವ"ದ ಕಲ್ಪನೆಯು ರೈತರು, ಆಹಾರ ಉತ್ಪತ್ತಿ ವಿಧಾನದ ಮೇಲೆ ಸಂಪೂರ್ಣ ಹಿಡಿತ ಹೊಂದುವುದನ್ನು ಬಲವಾಗಿ ಪ್ರತಿಪಾದಿಸುತ್ತದೆ.

ಈ ಕಲ್ಪನೆ ಲ್ಯಾಟಿನ್‌ ಅಮೇರಿಕಾ ದೇಶಗಳಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಕಳೆದ ದಶಕದಿಂದ ಏಶಿಯಾ ಖಂಡದಲ್ಲಿ ಪ್ರಚಾರಕ್ಕೆ ಬರುತ್ತಿದೆ. ಇದರ ಮುಂದುವರಿಕೆಯಾಗಿ ರೈತರು ಕೃಷಿ ಸಂಶೋಧನೆಯ ಮೇಲೂ ತಮ್ಮ ಹಕ್ಕನ್ನು ಸಾಧಿಸಬೇಕಿದೆ. ಬಹಳ ಸಮಯದವರೆಗೆ ಕೃಷಿ ಸಂಶೋಧನೆ ಎಂಬುದು ಕೇವಲ ಪರಿಣಿತರಿಗಷ್ಟೇ ಸೀಮಿತವಾದ ಕ್ಷೇತ್ರವೆಂದು ಭಾವಿಸಲ್ಪಟ್ಟಿತ್ತು. ಆದುದರಿಂದ ರೈತರನ್ನು ಕೇವಲ, ಸಂಶೋಧನೆಯ ಫಲಾನುಭವಿಗಳೆಂದು ತೀರ್ಮಾನಿಸಿ ಅವರನ್ನು ಸಂಶೋಧನಾ ವಲಯದಿಂದ ಹೊರಗಿಡಲಾಗಿತ್ತು. ಕೃಷಿ ಉತ್ಪಾದನೆಯಲ್ಲಿ ಯಾವುದೇ ವೈಫಲ್ಯವಾದಾಗ ರೈತರ ಅಜ್ಞಾನ ಮತ್ತು ಅಸಮರ್ಥತೆಯೇ ವೈಫಲ್ಯಕ್ಕೆ ಕಾರಣ ಎಂದು ರೈತರನ್ನು ದೂಷಿಸಲಾಗುತ್ತಿತ್ತು. ವೈಫಲ್ಯಕ್ಕೆ ಕೃಷಿ ಸಂಶೋಧನೆಯಲ್ಲಿಯೇ ಏನಾದರೂ ದೋಶವಿರಬಹುದೇ ಎಂದು ಒಮ್ಮೆಯೂ ಯೋಚಿಸಲಿಲ್ಲ. ಸಂಶೋಧನೆ ಯಾವಾಗಲೂ ಸಮಸ್ಯೆಗೆ ಸರಿಯಾದ ಉತ್ತರವನ್ನು ಕಂಡುಹಿಡಿಯುತ್ತದೆ, ಆದರೆ ಅದಕ್ಕೆ ಮೊದಲು, ಸಮಸ್ಯೆಯನ್ನು ಅದು ಸರಿಯಾಗಿ ಅರ್ಥಮಾಡಿಕೊಂಡಿರುತ್ತದೆಯೇ? ಎಂಬುದು ಸಾಮಾನ್ಯರಿಗಿರುವ ಅನುಮಾನ.

ದಕ್ಷಿಣ ಏಶಿಯಾದಲ್ಲಿ ರೈತರು ಕೃಷಿ ವಿಜ್ಞಾನವೆಂಬುದನ್ನು ಹಲವು ಶತಮಾನಗಳಿಂದ ಅಭಿವೃದ್ಧಿ ಪಡಿಸಿದ್ದಾರೆ. ಬೇಸಾಯ ಶಾಸ್ತ್ರ, ಭೂ ಸತ್ವ ಹಾಗೂ ಸಸ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ದಕ್ಷಿಣ ಏಶಿಯಾ ರೈತರು ಮಾಡಿರುವ ಹಲವು ಸಂಶೋಧನೆಗಳು ಅಚ್ಚರಿಯನ್ನುಂಟುಮಾಡುತ್ತವೆ. ದಕ್ಕನ್ ಪ್ರದೇಶದ ಒಣ ಭೂಮಿಯಲ್ಲಿಯ ಜೀವ ವೈವಿಧ್ಯವು ಸಂಶೋಧನೆಯ ವಿಸ್ಮಯ ಲೋಕವಾಗಿದೆ. ಹಾಗೆಯೇ ಪೂರ್ವ ಭಾರತದ ಗದ್ದೆಗಳಲ್ಲಿ ಮಾಡುವ ಮೀನು-ಭತ್ತ-ಬಾತುಕೋಳಿ ವ್ಯವಸಾಯ ಕೂಡ ಅದ್ಭುತ. ಅಂತೆಯೇ ಮಲೆನಾಡಿನ ಸಾಂಬಾರ ಬೆಳೆಯ ತೋಟಗಳೂ ಸಹ. ಈ ಪ್ರತಿಯೊಂದು ಕೃಷಿವಲಯವೂ ಜೀವ ವೈವಿಧ್ಯದ ವಿಶ್ವವಿದ್ಯಾನಿಲಯ. ಹೀಗೆ ರೈತರು ಇಂತಹ ಅನೇಕ ಸಂಶೋಧನೆಗಳನ್ನು ಮಾಡಿರುವಾಗ ಅವರನ್ನು ಕೃಷಿ ಸಂಶೋಧನಾ ವಲಯದಿಂದ ಹೊರಗಿಟ್ಟಿರುವುದೇಕೆ?

ಇದು ಅರಿವಿಗೆ ಬರುತ್ತಿದ್ದಂತೆ ಏಶಿಯಾದ ಅನೇಕ ನಾಗರೀಕ ಸಂಘಟನೆಗಳು ರೈತ ಮುಂದಾಳತ್ವದ ಕೃಷಿ ಸಂಶೋಧನೆಗೆ ಸಂಬಂಧಪಟ್ಟಂತೆ ಸಂವಾದಕ್ಕೆ, ಸಾರ್ವಜನಿಕ ಚರ್ಚೆಗೆ ಆನೇಕ ಕ್ರಮಗಳನ್ನು ಕೈಗೊಂಡಿವೆ. ಹಾಗೆಯೇ ತಳಮಟ್ಟದ ಕೃಷಿ ಸಂಶೋಧನೆಯಾದ ಯೋಜನೆ, ಅಂಕಿ -ಅಂಶ ಸಂಗ್ರಹಣೆ ಮತ್ತು ಕೃಷಿ ಸಂಶೋಧನೆಯ ವಿಶ್ಲೇಷಣೆಯಲ್ಲಿ ನೇರವಾಗಿ ರೈತ ಸಮುದಾಯಗಳನ್ನು ತೊಡಗಿಸುತ್ತಿವೆ.

‘ಪ್ರಪಂಚದಾದ್ಯಂತ, ಸಾರ್ವಜನಿಕ ಹೂಡಿಕೆಯ ಸಂಶೋಧನೆಗಳು, ರೈತರಿಗೆ, ಆಹಾರ ಕ್ಷೇತ್ರದ ಕೆಲಸಗಾರರಿಗೆ ಹಾಗೂ ಬಳಕೆದಾರರಿಗಿರುವ ಆಯ್ಕೆಗಳನ್ನೂ, ಅವರು ಮಾಡುವ ಹಾಗೂ ಜೀವಿಸುವ ವಾತಾವರಣವನ್ನು ರೂಪಿಸತೊಡಗಿವೆ. ಸೀಮಿತ ದೃಷ್ಟಿ ಕೋನದ ಆರ್ಥಿಕ ಆಸಕ್ತಿಗಳನ್ನು ದೂರ ಇಟ್ಟು ಸಾರ್ವಜನಿಕ ಹಿತವನ್ನು ಕಾಪಾಡುವ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪಾಲಿಸಿ ಪ್ರಜಾತಾಂತ್ರೀಕರಣಗೊಳಿಸುವ ದಾರಿಗಳನ್ನು ಹುಡುಕಬೇಕಿದೆ’ ಎಂದು ಇಂಗ್ಲೆಂಡ್‌ ದೇಶದ ಅಂತಾರಾಷ್ಟ್ರೀಯ ಪರಿಸರ ಮತ್ತು ಅಭಿವೃದ್ಧಿ ಸಂಸ್ಥೆಯ ಡಾ.ಮೈಕೆಲ್‌ ಪಿಂಬರ್ಟ್‌ ಹೇಳುತ್ತಾರೆ.

೨೦೦೫ ರಿಂದ ೨೦೦೭ ರ ವರೆಗೆ ರೈತರೊಂದಿಗೆ, ದನಗಾಹಿಗಳೊಂದಿಗೆ, ಆದಿವಾಸಿಗಳೊಂದಿಗೆ, ನೀತಿ ನಿರೂಪಕರೊಂದಿಗೆ ಮತ್ತು ಸಾಮಾಜಿಕ ಚಳುವಳಿಗಳ ಪ್ರತಿನಿಧಿಗಳೊಂದಿಗೆ ವಿವಿಧ ಹಂತಗಳಲ್ಲಿ ನಡೆಸಿದ ಮಾತುಕತೆಯು, ತಮಗೆ ಬೇಕಾದ ಆಹಾರ ಮತ್ತು ಕೃಷಿ ಸಂಶೋಧನೆಗೆ ಸಂಬಂಧಿಸಿದಂತೆ ನಾಗರೀಕರಿಗಿರುವ ಪರಿಕಲ್ಪನೆಯನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿರ್ಧರಿಸಲು ಅವರನ್ನು ಸಮರ್ಥರನ್ನಾಗಿಸಲು ಬಹು ದೇಶಗಳ ಮಟ್ಟದಲ್ಲಿ ಉಪಕ್ರಮವೊಂದನ್ನು ರೂಪಿಸಲಾಯಿತು. ಈ ಅಂತಾರಾಷ್ಟ್ರೀಯ ಉಪಕ್ರಮವು, ಆಹಾರ ವ್ಯವಸ್ಥೆಯ ಪಾಲನೆಯ ಪ್ರಜಾತಾಂತ್ರೀಕರಣ ಮತ್ತು ಸಾರ್ವಜನಿಕ ಹಿತಕ್ಕಾಗಿ ಆಹಾರ ಮತ್ತು ಕೃಷಿ ಸಂಶೋಧನೆಯ ಬಗೆಗಿನ ನಾಗರೀಕ ಮರು ಚಿಂತನೆಯ ಪ್ರಸ್ತಾಪವನ್ನು ತನ್ನ ಯೋಜನೆಯನ್ನಾಗಿಸಿಕೊಂಡಿದೆ. ಈ ಉಪಕ್ರಮವು ವಿಕೇಂದ್ರಿತವಾದ, ತಳದಿಂದ ಮೇಲಕ್ಕೆ ಚಲಿಸುವ ಮತ್ತು ರೈತರು ಹಾಗೂ ನಾಗರೀಕರು ಆಹಾರ ಸಾರ್ವಭೌಮತ್ವಕ್ಕಾಗಿ ನಿರ್ಧರಿಸುವ, ಕೃಷಿ ಸಂಶೋಧನೆಯ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ. ಜೊತೆಗೆ ಕೃಷಿ ಸಂಶೋಧನೆಯ ನೀತಿ ಹಾಗೂ ರೂಢಿಗಳ ಬದಲಾವಣೆಗೆ ಸಾಮೂಹಿಕವಾಗಿ ಒತ್ತಡ ತರಲು ಸಂಘಟನಾತ್ಮಕ ಕಾರ್ಯಮಾಡುತ್ತದೆ.

ಈ ಜನ ಸಹಭಾಗಿತ್ವದ ಪ್ರಕ್ರಿಯೆಯಲ್ಲಿ ಸಣ್ಣ ರೈತರು, ಆದಿವಾಸಿಗಳು, ದನಗಾಹಿಗಳು, ಆಹಾರ ಕ್ಷೇತ್ರದ ಕಾರ್ಮಿಕರು ಮತ್ತು ಇತರ ನಾಗರೀಕರು ಯಾವುದೇ ಹಿಂಜರಿಕೆ ಇಲ್ಲದೆ ಪಾಲ್ಗೊಳ್ಳಲು ಸಾಧ್ಯವಾಗುವಂತಹ ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ಪ್ರಪಂಚದ ನಾಲ್ಕು ವಲಯಗಳಲ್ಲಿ ,೨೦೦೭ ಪ್ರಕ್ರಿಯೆ ಪ್ರಾರಂಭಿಸಲಾಯಿತು. ಪಶ್ಚಿಮ ಆಫ್ರಿಕಾದಲ್ಲಿ ಮಾಲಿ ದೇಶವನ್ನು,ದಕ್ಷಿಣ ಏಶಿಯಾದಲ್ಲಿ ಭಾರತವನ್ನು, ಪಶ್ಚಿಮ ಏಶಿಯಾದಲ್ಲಿ ಇರಾನ್‌ ದೇಶವನ್ನು ಹಾಗೂ ಲ್ಯಾಟಿನ್‌ ಅಮೇರಿಕಾದಲ್ಲಿ ಬೊಲಿವಿಯಾ ದೇಶವನ್ನು ಸಂಯೋಜಕ ದೇಶಗಳಾಗಿ ನಿಯೋಜಿಸಲಾಯಿತು..

ವಲಯ ಸಂಯೋಜಕರು, ಅಂತಾರಾಷ್ಟ್ರೀಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ, ಅಂತಾರಾಷ್ಟ್ರೀಯ ಪರಿಸರ ಮತ್ತು ಅಭಿವೃದ್ಧಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ಕೆಲಸಮಾಡುತ್ತಾರೆ. ಈ ಇಡೀ ಪ್ರಕ್ರಿಯೆಗೆ ‘ಆದರ್ಶ’ ಎಂದು ನಾಮಕರಣ ಮಾಡಲಾಗಿದೆ. ದಕ್ಷಿಣ ಏಶಿಯಾದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಆಂಧ್ರಪ್ರದೇಶದ ಡೆಕ್ಕನ್‌ ಡೆವಲಪ್‌ಮೆಂಟ್‌ ಸೊಸೈಟಿ ಕಳೆದ ೨೫ ವರ್ಷಗಳಿಂದ ಅತಿ ಸಣ್ಣ ರೈತರು, ದಲಿತ ಮಹಿಳಾ ರೈತರೊಂದಿಗೆ ಕಾರ್ಯನಿರ್ವಹಿಸುತ್ತಿದೆ.


ಈ ಕ್ರಿಯಾ ಸಂಶೋಧನೆಯು ಡೆಕ್ಕನ್‌ ಡೆವಲಪ್‌ಮೆಂಟ್‌ ಸೊಸೈಟಿ ಹಾಗೂ ಅಂತಾರಾಷ್ಟ್ರೀಯ ಪರಿಸರ ಮತ್ತು ಅಭಿವೃದ್ಧಿ ಸಂಸ್ಥೆಯ ಅಪಾರ ಅನುಭವವನ್ನು ಆಧಾರವಾಗಿ ಹೊಂದಿದೆ. ಈ ಹೊಸ ಪ್ರಯೋಗವು, ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದ ತೀರ್ಮಾನಗಳು, ನೀತಿ-ನಿರೂಪಣೆ, ಸಂಪನ್ಮೂಲ ವಿತರಣೆ, ಸಂಶೋಧನಾ ಸಂಸ್ಥೆಗಳ ಆಯ್ಕೆಗೆ ಸಂಬಂಧಿಸಿದ ವಿಷಯಗಳಲ್ಲಿ, ನಾಗರೀಕರು ಹಾಗೂ ತಜ್ಞರಲ್ಲದವರೂ ಸಹ ಪಾಲ್ಗೊಳ್ಳುವ ಅವಕಾಶಗಳನ್ನು ಹೆಚ್ಚಿಸಲಿದೆ. ಉದಾಹರಣೆಗೆ, ಈ ಹಿಂದೆ ಆಂಧ್ರ ಪ್ರದೇಶದಲ್ಲಿ ನಡೆದ ‘ಪ್ರಜಾ ತೀರ್ಪು ’ ಎಂಬ ಪ್ರಯೋಗ ಸರ್ಕಾರದ ‘ವಿಶನ್ ೨೦೨೦’ ಯೋಜನೆಯ ಪ್ರಭಾವಲಯಕ್ಕೆ ಸಿಲುಕಲಿರುವ ಜನರು, ಆಹಾರ ಮತ್ತು ಕೃಷಿಗೆ ಸಂಭಂಧಿಸಿದಂತೆ ತಮ್ಮದೇ ಆದ ಪರಿಕಲ್ಪನೆಯೊಂದನ್ನು ರೂಪಿಸಲು ಅನುವುಮಾಡಿಕೊಟ್ಟಿತು. ಈ ಪ್ರಯೋಗ ಅಂಚಿಗೆ ತಳ್ಳಲ್ಪಟ್ಟ ಸಣ್ಣ ರೈತರು, ಮಹಿಳೆಯರು,ಆದಿವಾಸಿಗಳನ್ನು ಒಳಗೊಂಡಿತ್ತು. ಈ ಪ್ರಯೋಗದಲ್ಲಿ ನಾಗರೀಕ ನ್ಯಾಯ ಮಂಡಳಿ, ಭವಿಷ್ಯದ ಚರ್ಚೆಯ ಕಾರ್ಯಾಗಾರಗಳು ನಡೆದವು. ಇವೆಲ್ಲವೂ ಪಕ್ಷಪಾತವಿಲ್ಲದೆ ಜರುಗುತ್ತಿರುವುದನ್ನು ವೀಕ್ಷಿಸಲು, ಗಣ್ಯರ ವೀಕ್ಷಣಾ ಸಮಿತಿ, ಸಾಕ್ಷಿಗಳು ಹೀಗೆ ನಾಗರೀಕ ನ್ಯಾಯ ಮಂಡಳಿಯ ಪ್ರಕ್ರಿಯೆಯಲ್ಲಿ ಈಗಾಗಲೇ ರೂಢಿಯಲ್ಲಿರುವ ಅನೇಕ ಅಂಶಗಳನ್ನು ಅಳವಡಿಸಿ ಕೊಳ್ಳಲಾಗಿತ್ತು.

ಅನೇಕ ವಲಯಗಳಲ್ಲಿ ನಡೆಯುತ್ತಿರುವ ಈ ಪ್ರಕ್ರಿಯೆಗೆ ಈ ಕೆಳಕಾಣಿಸಿದ ಸಂಸ್ಥೆಗಳು ಧನ ಸಹಾಯ ಮಾಡುತ್ತಿವೆ. ನೆದರಲ್ಯಾಂಡ್ ಮಿನಿಸ್ಟ್ರಿ ಆಫ್ ಫಾರಿನ್ ಅಫೇರ‍್, ದಿ ಸ್ವಿಸ್ ಡೆವಲಪಮೆಂಟ್ ಕೊಆಪರೇಶನ್, NOVIB-OXFAM , ದಿ ಕ್ರಿಸ್ಚಿಯನ್ ಫಂಡ್

English video kannada video