iied iied
ಮುಖ ಪುಟ
line
line
line
line
line
line
line
 
videos English video kannada video
English video kannada video English video kannada video English video kannada video English video kannada video English video kannada video English video kannada video
This web is in Kannada, in case you have problems viewing it : Download Kannada Fonts and Set Browser Encoding to UTF8
ಪ್ರಕ್ರಿಯೆ
ರೈತ ತೀರ್ಪಿನ ಪ್ರಕ್ರಿಯೆಯು ಒಟ್ಟು ಆರು ಭಾಗಗಳನ್ನು ಹೊಂದಿದೆ.
ರೈತ ನ್ಯಾಯಮಂಡಳಿಯು ವಾದ ಪ್ರತಿವಾದಗಳನ್ನು ಆಲಿಸಿದ ಮೇಲೆ ತನ್ನ ತೀರ್ಪನ್ನು ನೀಡುತ್ತದೆ.
ಸಂಚಾಲನಾ ಸಮಿತಿ:
ರೈತ ತೀರ್ಪಿನ ಕಲ್ಪನೆಯನ್ನು ಧಾರವಾಡ ಮತ್ತು ಬೆಂಗಳೂರಿನಲ್ಲಿ ನಡೆದ ಎರಡು ಪ್ರತ್ಯೇಕ ನಾಗರೀಕ ಸಭೆಗಳಲ್ಲಿ ಮಂಡಿಸಲಾಯಿತು. ಈ ಸಭೆಗಳು ಕ್ರಮವಾಗಿ ೬-೬-೨೦೦೯ ಹಾಗೂ ೧೬-೭-೨೦೦೯ ರಂದು ನಡೆದವು. ಈ ಸಭೆಗಳಲ್ಲಿ ರೈತರು, ಮಹಿಳೆಯರು, ರೈತಸಂಘಟನೆಗಳು ಗ್ರಾಹಕ ಸಂಘಟನೆಗಳ ಪ್ರತಿನಿಧಿಗಳು, ವಿಜ್ಞಾನಿಗಳು, ವಿದ್ವಾಂಸರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅವರೆಲ್ಲರೂ ರೈತ ತೀರ್ಪಿನ ವಿಚಾರವನ್ನು ಸರ್ವಾನುಮತದಿಂದ ಸಮರ್ಥಿಸಿದರು.
ಈ ಸಭೆಗಳಲ್ಲಿ ಭಾಗವಹಿಸಿದ ವ್ಯಕ್ತಿಗಳಿಂದ ಆಯ್ದ ಒಂದು ಕಾರ್ಯಕಾರಿ ಸಮಿತಿಯನ್ನು ರಚಿಸಿ ಅವರಿಗೆ ಕೆಳಕಾಣಿಸಿದ ಜವಾಬ್ದಾರಿಯನ್ನು ಕೊಡಲಾಯಿತು.
  • ರೈತ ತೀರ್ಪಿನ ಪ್ರಕ್ರಿಯೆಯನ್ನು ನೆರವೇರಿಸುವುದು.
  • ನ್ಯಾಯ ಮಂಡಳಿಗೆ ರೈತರನ್ನು ಆಯ್ಕೆಮಾಡಿ ತೀರ್ಮಾನಿಸುವುದು.
  • ನ್ಯಾಯ ಮಂಡಳಿ ಆಯ್ಕೆಗೆ ಮಾನದಂಡಗಳನ್ನು ಗೊತ್ತುಪಡಿಸುವುದು.
  • ವಿಚಾರ ಮಂಡನೆಗೆ ವಾದಿಗಳನ್ನು, ಸಾಕ್ಷಿಗಳನ್ನು ಗುರುತಿಸುವುದು.
  • ಆಸಕ್ತ ಜನರ ಪಟ್ಟಿಯನ್ನು ತಯಾರು ಮಾಡುವುದು.
  • ರೈತ ತೀರ್ಪು ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳ್ಳಲು ಬೇಕಾದ ವಿಷಯಗಳನ್ನು ಚರ್ಚಿಸಿ ತೀರ್ಮಾನಿಸುವುದು.
  • ರೈತ ತೀರ್ಪಿನ ಪ್ರಕ್ರಿಯೆಯು ಸಶಕ್ತಗೊಳ್ಳಲು ಬೇಕಾದ ಸಲಹೆ ಸೂಚನೆಗಳನ್ನು ನೀಡುವುದು.
ಕಾರ್ಯಕಾರಿ ಸಮಿತಿಯ ಸದಸ್ಯರು :

೧. ಆನಂದತೀರ್ಥ ಪ್ಯಾಟಿ, ಹಿರಿಯ ವರದಿಗಾರರು, ಪ್ರಜಾವಾಣಿ, ಗುಲ್ಬರ್ಗಾ.
೨. ಚನ್ನಬಸಪ್ಪ ಶಿವಪ್ಪ ಕೊಂಬಳಿ, ಅಧ್ಯಕ್ಷರು, ನ್ಯಾಚುರಲ್ ರಿಸೊರ್ಸ್ ಡೆವೆಲೆಪ್‌ಮೆಂಟ್‌ ಅಸೋಶಿಯೇಶನ್, ಕಾಕೋಳ, ಹಾವೇರಿ ಜಿಲ್ಲೆ.
೩. ಡಾ.ಎನ್‌.ದೇವಕುಮಾರ‍್, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.
೪. ಡಾ.ಎಲ್‌.ಜಿ.ಹಿರೇಗೌಡರ‍್, ಕೃಷಿ ವಿಜ್ಞಾನಕೇಂದ್ರ, ಹುಲಕೋಟಿ.
೫. ಡಾ.ಪ್ರಕಾಶ್‌ಭಟ್‌, ಧಾರವಾಡ.
೬. ಗೋಪಿಕೃಷ್ಣ, ಬೆಳಗಾವಿ.
೭. ಸುಬ್ಬಣ ಎಸ್‌.ಬೀರಾದಾರ‍್, ಬಯಲುಸೀಮೆ ರೂರಲ್ ಡವೆಲೆಪ್‌ಮೆಂಟ್‌ ಸೊಸೈಟಿ, ಗುಲ್ಬರ್ಗಾ.
೮. ವಿಶ್ವನಾಥ್ ಪಾಟೀಲ್‌ ಕೌತುಬಿ, ಕರ್ನಾಟಕ ರಾಜ್ಯ ರೈತ ಸಂಘ, ಬೀದರ್‌.
೯. ಸಂತೋಷ್‌ ಕೌಲಗಿ, ಮೇಲುಕೋಟೆ.
೧೦. ಶ್ರೀಮತಿ ಸುನಂದಾ ಜಯರಾಂ, ಕರ್ನಾಟಕ ರಾಜ್ಯ ರೈತ ಸಂಘ, ಮಂಡ್ಯ.
೧೧. ಬಸವರಾಜ್ ಸಂತೇಶಿವರ, ಹಾಸನ.
೧೨. ಕುರುಬೂರು ಶಾಂತಕುಮಾರ್‌, ರೈತ ಹೋರಾಟಗಾರರು, ಚಾಮರಾಜನಗರ.
೧೩. ವೈ.ಜಿ.ಮುರಳೀಧರ್‌, ಗ್ರಾಹಕ ಹಕ್ಕು ಹೋರಾಟಗಾರರು, ಬೆಂಗಳೂರು.
೧೪. ಡಾ.ಚೆನ್ನೇಶ್, ಕೃಷಿ ವಿಜ್ಞಾನಕೇಂದ್ರ, ಚಿಂತಾಮಣಿ.
೧೫. ಪಿ.ಬಾಬು, ಇಕ್ರಾ ಸಂಸ್ಥೆ, ಬೆಂಗಳೂರು.
೧೬. ಡಾ.ಪಿ.ವಿ.ಸತೀಶ್‌, ನಿರ್ದೇಶಕರು, ಡೆಕ್ಕನ್‌ ಡೆವೆಲಪ್‌ಮೆಂಟ್‌ ಸೊಸೈಟಿ, ಹೈದ್ರಾಬಾದ್‌.
೧೭. ಅನಿತಾ ಪೈಲೂರು, ಪತ್ರಕರ್ತರು, ಧಾರವಾಡ.
೧೮. ಪಾಂಡುರಂಗ ಹೆಗಡೆ, ಪರಿಸರ ಹೋರಾಟಗಾರರು, ಸಿರ್ಸಿ.

೧೯. ಮುರಳಿಧರ‍್. ಬೆಂಗಳೂರು.


೧. ಆನಂದತೀರ್ಥ ಪ್ಯಾಟಿ, ಹಿರಿಯ ವರದಿಗಾರರು, ಪ್ರಜಾವಾಣಿ, ಗುಲ್ಬರ್ಗಾ.
Cell: 9448240676, Email: anpyatee@gmail.com



 

 
೨. ಚನ್ನಬಸಪ್ಪ ಶಿವಪ್ಪ ಕೊಂಬಳಿ, ಅಧ್ಯಕ್ಷರು, ನ್ಯಾಚುರಲ್ ರಿಸೊರ್ಸ್ ಡೆವೆಲೆಪ್‌ಮೆಂಟ್‌ ಅಸೋಶಿಯೇಶನ್, ಕಾಕೋಳ, ಹಾವೇರಿ ಜಿಲ್ಲೆ.
Cell : 9845890411

 





೩. ಡಾ.ಎನ್‌.ದೇವಕುಮಾರ‍್, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.
Cell : 9480037870, Email : ndevakumar@yahoo.com

 

 

 


೪. ಡಾ.ಎಲ್‌.ಜಿ.ಹಿರೇಗೌಡರ‍್, ಕೃಷಿ ವಿಜ್ಞಾನಕೇಂದ್ರ, ಹುಲಕೋಟಿ – 582 205
Ph: 9448358772, Email: khpatil_kvk_hulkoti@yahoo.com, laxs@gmail.com
Hiregowdru speaking

 

 

 


೫. ಡಾ.ಪ್ರಕಾಶ್‌ಭಟ್‌, ಧಾರವಾಡ.
Ph: 0836 –2776747, 9008452447, Email:bhatps@gmail.com
Prakash Bhat

 

 

 


೬. ಗೋಪಿಕೃಷ್ಣ, ಬೆಳಗಾವಿ.- 590 006
Cell: 9448132609, Tel: 0831-2421609, Email: gopi.krishna50@yahoo.com     
website : www.mitan.in

 

 

 


೭. ಸುಬ್ಬಣ ಎಸ್‌.ಬೀರಾದಾರ‍್, ಬಯಲುಸೀಮೆ ರೂರಲ್ ಡವೆಲೆಪ್‌ಮೆಂಟ್‌ ಸೊಸೈಟಿ, ಗುಲ್ಬರ್ಗಾ.
Cell : 9972157413, Email: bsrdsglb@rediffmail.com, bsrdsglb@gmail.com

 

 

 


೮. ವಿಶ್ವನಾಥ್ ಪಾಟೀಲ್‌ ಕೌತುಬಿ, ಕರ್ನಾಟಕ ರಾಜ್ಯ ರೈತ ಸಂಘ, ಬೀದ.
Cell: 9341084287

 

 

 


೯. ಸಂತೋಷ್‌ ಕೌಲಗಿ, ಮೇಲುಕೋಟೆ.

 

 

 



೧೦ ಶ್ರೀಮತಿ ಸುನಂದಾ ಜಯರಾಂ, ಕರ್ನಾಟಕ ರಾಜ್ಯ ರೈತ ಸಂಘ, ಮಂಡ್ಯ.

 

 

 


೧೧. ಬಸವರಾಜ್ ಸಂತೇಶಿವರ, ಹಾಸನ.

 

 

 


೧೨. ಕುರುಬೂರು ಶಾಂತಕುಮಾರ್‌, ರೈತ ಹೋರಾಟಗಾರರು, ಚಾಮರಾಜನಗರ.

 


 


೧೩. ವೈ.ಜಿ.ಮುರಳೀಧರ್‌, ಗ್ರಾಹಕ ಹಕ್ಕು ಹೋರಾಟಗಾರರು, ಬೆಂಗಳೂರು.

 

೧೪. ಡಾ.ಚೆನ್ನೇಶ್, ಕೃಷಿ ವಿಜ್ಞಾನಕೇಂದ್ರ, ಚಿಂತಾಮಣಿ.

 

 

 

 

೧೫. ಪಿ.ಬಾಬು, ಇಕ್ರಾ ಸಂಸ್ಥೆ, ಬೆಂಗಳೂರು.

 

 

 

 

೧೬. ಡಾ.ಪಿ.ವಿ.ಸತೀಶ್‌, ನಿರ್ದೇಶಕರು, ಡೆಕ್ಕನ್‌ ಡೆವೆಲಪ್‌ಮೆಂಟ್‌ ಸೊಸೈಟಿ, ಹೈದ್ರಾಬಾದ್‌.

 



 

೧೭. ಅನಿತಾ ಪೈಲೂರು, ಪತ್ರಕರ್ತರು, ಧಾರವಾಡ.
Ph: 0836 – 2444736, Cell: 9448410077, Email: anithapailoor@gmail.com

 

 

 

 

೧೮. ಪಾಂಡುರಂಗ ಹೆಗಡೆ, ಪರಿಸರ ಹೋರಾಟಗಾರರು, ಸಿರ್ಸಿ.

 

 

 

೧೯. ಮುರಳಿಧರ‍್. ಬೆಂಗಳೂರು.

 

ಮೇಲ್ವೀಕ್ಷಣಾ ಸಮಿತಿ

ಹಿರಿಯರು ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಗೌರವದ ಸ್ಥಾನ ಪಡೆದವರು ಮೇಲ್ವಿಕ್ಷಣಾ ಸಮಿತಿಯ ಸದಸ್ಯರಾಗಿರುತ್ತಾರೆ. ರೈತ ತೀರ್ಪಿನ ಇಡೀ ಪ್ರಕ್ರಿಯೆ ಪಕ್ಷಾತೀತವಾಗಿ, ಪೂರ್ವಾಗ್ರಹವಿಲ್ಲದೆ ಮತ್ತು ನ್ಯಾಯಯುತವಾಗಿ ನಡೆಯುತ್ತಿರುವುದನ್ನು ಪರಿವೀಕ್ಷಿಸುವುದು ಈ ಸಮಿತಿಯ ಪ್ರಮುಖ ಜವಾಬ್ದಾರಿಯಾಗಿದೆ.

ರೈತ ತೀರ್ಪಿಗೆ ಸಂಬಂಧಿಸಿದ ಪ್ರತಿಯೊಂದು ಬೆಳವಣಿಗೆಯನ್ನು ನಿರಂತರವಾಗಿ ಮೇಲ್ವೀಕ್ಷಣಾ ಸಮಿತಿಯ ಸದಸ್ಯರ ಗಮನಕ್ಕೆ ತರಲಾಗುತ್ತಿರುತ್ತದೆ. ಆಗಿಂದಾಗ್ಗೆ ಈ ಸಮಿತಿಯ ಸದಸ್ಯರ ಸಲಹೆ ಮತ್ತು ಅಭಿಪ್ರಾಯಗಳನ್ನು ಪಡೆಯಲಾಗುತ್ತದೆ.

ಮೇಲ್ವೀಕ್ಷಣಾ ಸಮಿತಿಯ ಸದಸ್ಯರು.


ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಾಧೀಶರು. ಡಾ.ಎಚ್‌.ಸುದರ್ಶನ್‌, ಮ್ಯಾಗ್ಸೆಸೆ ಮತ್ತು ರೈಟ್‌ ಲೈವ್ಲಿಹುಡ್ ಪ್ರಶಸ್ತಿ ಪುರಸ್ಕೃತರು ಮತ್ತು ಮಾಜಿ ಉಪಲೋಕಾಯುಕ್ತರು.
ಡಾ.ಗೋಪಾಲ್ ಕಡೇಕಡಿ, ಖ್ಯಾತ ಅಭಿವೃದ್ಧಿ ಅರ್ಥಶಾಸ್ತ್ರಜ್ಞರು ಮತ್ತು ಸಾಮಾಜಿಕ ಮತ್ತು ಆರ್ಥಿಕ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕರು. ಡಾ.ದ್ವಾರಕಿನಾಥ್, ಕರ್ನಾಟಕ ಕೃಷಿ ಆಯೋಗದ ಮಾಜಿ ಅಧ್ಯಕ್ಷರು ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಕುಲಸಚಿವರು.
ಶ್ರೀ ಕೆ.ಆರ‍್.ವೇಣುಗೋಪಾಲ್‌, ಐ.ಎ.ಎಸ್‌, ಪ್ರಧಾನಮಂತ್ರಿಗಳ ಮಾಜಿ ಸಲಹೆಗಾರರು ಮತ್ತು ಭಾರತದ ಸಾರ್ವಜನಿಕ ಆಹಾರ ವಿತರಣಾ ವ್ಯವಸ್ಥೆಯ ಪಿತಾಮಹರೆಂದು ಗುರುತಿಸಲ್ಪಟ್ಟವರು ಮತ್ತು ರಾಷ್ಟ್ರೀಯ ಮಾನವಹಕ್ಕು ಆಯೋಗದ ಮಾಜಿ ವರದಿಗಾರರು. ಲಲಿತಾ ನಾಯಕ್
ಶ್ರೀಮತಿ ಹೆಮಲತಾ ಮಹಿಶಿ ಡಾ. ಹನುಮಂತಯ್ಯ
       
ಸಂಪನ್ಮೂಲ ವ್ಯಕ್ತಿಗಳು ಮತ್ತು ಸಲಹೆಗಾರರು

ಡಾ. ಮೈಕೆಲ್ ಪಿಂಬರ್ಟ್, ಸದ್ಯ ಇಂಗ್ಲೆಂಡ್‌ ದೇಶದಲ್ಲಿರುವ ಅಂತಾರಾಷ್ಟ್ರೀಯ ಪರಿಸರ ಮತ್ತು ಅಭಿವೃದ್ಧಿ ಸಂಸ್ಥೆಯ, ಸುಸ್ಥಿರ ಕೃಷಿ, ಜೀವ ವೈವಿಧ್ಯ ಮತ್ತು ಜೀವನೋಪಾಯ ಕಾರ್ಯಕ್ರಮಗಳ ವಿಭಾಗದ ನಿರ್ದೇಶಕರಾಗಿ ಕೆಲಸಮಾಡುತ್ತಿದ್ದಾರೆ. ತರಬೇತಿಯಿಂದ ಕೃಷಿ ಪರಿಸರ ತಜ್ಞರಾದ ಡಾ.ಪಿಂಬರ್ಟ್‌ರವರು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸಮಾಡಿದ್ದಾರೆ.

ಅವರ ಕ್ರಿಯಾ ಸಂಶೋಧನೆಗಳು ಆಹಾರ ಸಾರ್ವಭೌಮತ್ವ, ಸುಸ್ಥಿರ ಕೃಷಿ, ಸ್ವಾಭಾವಿಕ ಸಂಪನ್ಮೂಲ ಮತ್ತು ಜೀವ ವೈವಿಧ್ಯ ನಿರ್ವಹಣೆ ಮುಂತಾದವುಗಳನ್ನು ಒಳಗೊಂಡಿದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಮೇಲೆ ಹೇಳಿದ ವಿಷಯಗಳ ಬಗ್ಗೆ ಹಲವಾರು ಪ್ರಕಟಣೆಗಳ ಮೂಲಕ ಸಿದ್ಧಾಂತ ಮತ್ತು ಆಚರಣೆಗಳನ್ನು ಬೆಸೆಯುತ್ತಿದ್ದಾರೆ.

ಆಹಾರ ಸಾರ್ವಭೌಮತ್ವ, ಸುಸ್ಥಿರ ಕೃಷಿ ಮತ್ತು ನಾಗರೀಕ ಹಕ್ಕಿಗಾಗಿ ಕೆಲಸಮಾಡುತ್ತಿರುವ ಹಲವು ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳ ಸದಸ್ಯರಾಗಿದ್ದಾರೆ.

ಡಾ.ಮೈಕೆಲ್ ಪಿಂಬರ್ಟ್‌ರವರು ರೈತ ತೀರ್ಪಿನ ವಿಧಿವಿಧಾನಗಳಿಗೆ ಸಂಬಂಧಿಸಿದಂತೆ ಸಲಹೆಗಾರರು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರೈತ ನ್ಯಾಯಮಂಡಳಿ
ರೈತ ನ್ಯಾಯಮಂಡಳಿಯಲ್ಲಿ ೩೦ ಜನ ಸದಸ್ಯರಿರುತ್ತಾರೆ. ಇದರಲ್ಲಿ ರಾಜ್ಯದ ಎಲ್ಲ ಪ್ರದೇಶಗಳಿಗೂ ಪ್ರಾತಿನಿಧ್ಯವಿರುತ್ತದೆ. ಮಹಿಳೆಯರು ಹಾಗೂ ಪುರುಷರು ಇರುತ್ತಾರೆ. ಅಲ್ಲದೆ ಆದಿವಾಸಿಗಳು ದಲಿತರು, ಗೋಪಾಲಕರು ಮತ್ತು ಕೃಷಿಕಾರ್ಮಿಕರಿಗೆ ಪ್ರಾತಿನಿಧ್ಯವಿರುತ್ತದೆ.
ರೈತ ನ್ಯಾಯಮಂಡಳಿಗೆ ಆಯ್ಕೆ

ರೈತ ನ್ಯಾಯಮಂಡಳಿಗೆ ಸದಸ್ಯರ ನಾಮಕರಣಕ್ಕೆ ವ್ಯಾಪಕ ಪ್ರಚಾರ ನೀಡಲಾಗಿದೆ. ಬಂದ ಅರ್ಜಿಗಳಲ್ಲಿ ನೂರು ಅರ್ಜಿಗಳನ್ನು ಕಾರ್ಯಕಾರಿ ಸಮಿತಿ ಆಯ್ಕೆ ಮಾಡಿ ಅಂತಿಮವಾಗಿ ಮೂವತ್ತು ಜನರ ನ್ಯಾಯ ಮಂಡಳಿಯನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಗೆ ಸಂಬಂಧಿಸಿದಂತೆ ಕಾರ್ಯಕಾರಿ ಮಂಡಳಿಯು ಹಲವು ಮಾನದಂಡಗಳನ್ನು ರೂಪಿಸಿದೆ.

ಆಯ್ದ ನೂರು ಜನರ ಪಟ್ಟಿಯನ್ನು ಮಂಗಳೂರಿನ ರೋಷನಿ ನಿಲಯ ಶಿಕ್ಷಣ ಸಂಸ್ಥೆಗೆ ಕೊಡಲಾಗುತ್ತದೆ. ಈ ಸಂಸ್ಥೆಯವರು ಈ ನೂರು ಜನರನ್ನು ಸಂದರ್ಶಿಸಿ ಕಾರ್ಯಕಾರಿ ಮಂಡಳಿಯ ಮಾನದಂಡಗಳಗೆ ಸರಿ ಹೊಂದುವ ಮೂವತ್ತು ಜನರ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. ಈ ಪಟ್ಟಿಯನ್ನು ಕಾರ್ಯಕಾರಿ ಸಮಿತಿ ಮತ್ತು ಮೇಲ್ವೀಕ್ಷಣಾ ಸಮಿತಿ ಸಮರ್ಥಿಸುತ್ತದೆ.

ನ್ಯಾಯ ಮಂಡಳಿಯ ಸದಸ್ಯರ ಪಟ್ಟಿ
ಸಂಖ್ಯೆ ಹೆಸರು ಸಂಖ್ಯೆ ಹೆಸರು
ಸಾಮವ್ವ
ಸಾಯಬನ್ನ ಇಂಚಕಲ ಗ್ರಾಮ ಬಿಜಾಪುರ ಜಿಲ್ಲೆ
೫೦ ವರ್ಷ
ಜಾತಿ : ಪರಿಶಿಷ್ಟ ಜಾತಿ
ಇವರು ಆರು ಎಕರೆ ಒಣ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಮುಸುಕಿನಜೋಳ, ಸೂರ್ಯಕಾಂತಿ, ತೊಗರಿ, ಹೆಸರು, ಜೋಳ ಬೆಳೆಯುತ್ತಾರೆ. ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸುತ್ತಾರೆ.
ಶೋಭಾವತಿ, ತುಗಾವೆ
ಔರಾದ ಗ್ರಾಮ ಬೀದರ ಜಿಲ್ಲೆ
ವಯಸ್ಸು : ೩೬ ವರ್ಷ
ಜಾತಿ : ಸಾಮಾನ್ಯ ವರ್ಗ
ಎರಡು ಎಕರೆ ಭೂಮಿ ಹೊಂದಿದ್ದಾರೆ. ಪಾರಂಪರಿಕ ಪದ್ಧತಿಯಲ್ಲಿ ನವಣೆ, ಭತ್ತ, ತೊಗರಿ, ಮುಸಕಿನಜೋಳ, ರಾಗಿ ಮತ್ತು ಹೆಸರು ಬೆಳೆಯುತ್ತಾರೆ.
ಮಾರುತಿ ಕಾಂಬ್ಲೆ
ಬಜೆಪಲ್ಲಿ ಗ್ರಾಮ, ಬೀದರ ಜಿಲ್ಲೆ.
ವಯಸ್ಸು : ೬೦ ವರ್ಷ
ಜಾತಿ :ಪರಿಶಿಷ್ಟ ಜಾತಿ
ಎರಡು ಎಕರೆ ಭೂಮಿಯಲ್ಲಿ ಮಳೆಯಾಶ್ರಿತ ಬೇಸಾಯ. ಮುಸುಕಿನಜೋಳ, ಹೆಸರು, ತೊಗರಿ ಬೇಳೆಯುತ್ತಾರೆ.
ಲಕ್ಷ್ಮೀಬಾಯಿ ಕಾಂಬ್ಲೆ
ನೆಲ್ಲೂರು, ಗುಲ್ಬರ್ಗಾ ಜಿಲ್ಲೆ
ವಯಸ್ಸು : ೩೮ ವರ್ಷ
ಜಾತಿ : ಪರಿಶಿಷ್ಟ ವರ್ಗ
ಎರಡು ಎಕರೆ ಮಳೆಯಾಶ್ರೀತ ಕೃಷಿ ಭೂಮಿಯಲ್ಲಿ ತೊಗರಿ, ಸೂರ್ಯಕಾಂತಿ ಬೆಳೆಯುತ್ತಾರೆ. ಮಳೆಯ ಅನಿಶ್ಚತತೆ ಸಮಸ್ಯೆಯಾಗಿದೆ. ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿದ್ದಾರೆ.
ಅಜ್ಜಮ್ಮ ಇಲ್ಲೆಪ್ಪನವರ.
ಎಲ್ಲೇರಿ ಗ್ರಾಮ ಗುಲ್ಬರ್ಗಾ ಜಿಲ್ಲೆ
ವಯಸ್ಸು : ೬೩ ವರ್ಷ
ಜಾತಿ : ಪರಿಶಿಷ್ಟ ಜಾತಿ
ಒಂಭತ್ತು ಎಕರೆ ಭೂಮಿ ಹೊಂದಿದ್ದು ಪೂರ್ತಿ ಮಳೆಯಾಧಾರಿತ ಕೃಷಿ. ತೊಗರಿ,ಸೂರ್ಯಕಾಂತಿ, ಮೆಕ್ಕೆ ಜೋಳ, ಭತ್ತ ಮತ್ತು ಶೇಂಗಾ ಬಳೆಗಳನ್ನು ಸಾವಯವ ಕೃಷಿ ಮಾಡುತ್ತಾರೆ. ಎರೆಹುಳು ಗೊಬ್ಬರ ತಯಾರಿಸಿ ಬಳಸುತ್ತಾರೆ.
ರುದ್ರಪ್ಪ ಝಲ್ಪಿ
ಹುಲಿಯಾಳ ಬಾಗಲಕೋಟೆ ಜಿಲ್ಲೆ
ವಯಸ್ಸು : ೩೯ ವರ್ಷ
ಜಾತಿ :ಸಾಮಾನ್ಯ ವರ್ಗ
ಐದು ಎಕರೆ ಒಣ ಬೂಮಿ, ಹತ್ತು ಎಕರೆ ನೀರಾವರಿ ಭೂಮಿ ಹೊಂದಿದ್ದಾರೆ. ಕಬ್ಬು, ಅರಿಶೀನ, ಗೋಧಿ, ತರಕಾರಿ, ವಿವಿಧ ತಳಿಗಳ ಮಸುಕಿನಜೋಳ ಬೆಳೆಯುತ್ತಾರೆ. ಸಹಜ ಕೃಷಿ ಪದ್ಧತಿಯಲ್ಲಿ ವ್ಯವಸಾಯ ಮಾಡುತ್ತಾರೆ. ಚೀನಾ ದೇಶಕ್ಕೆ ಕೃಷಿ ಪ್ರವಾಸ ಹೋಗಿ ಬಂದಿದ್ದಾರೆ. ದೇಸಿ ಬದನೆ ಮತ್ತು ಗೋಧಿಯ ತಳಿಗಳನ್ನು ಸಂರಕ್ಷಿಸಿದ್ದಾರೆ. ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿರುವ ಇವರು ಸಹಜ ಕೃಷಿಯ ಬಗೆಗೆ ಅನೇಕ ಉಪನ್ಯಾಸಗಳನ್ನು ನೀಡುತ್ತಿರುತ್ತಾರೆ.
ಸದಾಶಿವಯ್ಯ
ಮಾರಗೌಡನ ಹಳ್ಳಿ ತುಮಕೂರು ಜಿಲ್ಲೆ
ವಯಸ್ಸು : ೭೪ ವರ್ಷ
ಜಾತಿ : ಸಾಮಾನ್ಯ ವರ್ಗ
ಸಾವಯವ ಕೃಷಿ ಪದ್ಧತಿಯಲ್ಲಿ ತೆಂಗು, ಅಡಕೆ, ಆಹಾರ ಬೆಳೆಗಳನ್ನು ಬೇಳೆಯುತ್ತಿದ್ದಾರೆ.
ಈರಯ್ಯ ಕಿಲ್ಲೇದಾರ,
ಕವಿತ ಪ್ರಕಶನ್ಗುಡಿಕಟ್ಟಿ (ಅ) ಗೋವಿನಕೊಪ್ಪ
ಬೆಳಗಾವಿ ಜಿಲ್ಲೆ
ವಯಸ್ಸು : ೫೧ ವರ್ಷ
ಜಾತಿ : ಸಾಮಾನ್ಯ ವರ್ಗ
ತಮ್ಮ ೧.೫ ಎಕರೆ ಕೃಷಿ ಭೂಮಿಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ಕವನಗಳನ್ನು, ಕೃಷಿ ಸಂಬಂಧಿ ಲೇಖನಗಳನ್ನೂ ಬರೆಯುತ್ತಾರೆ. ೬೦೦ ಮಿಕ್ಕಿ ವಿವಿಧ ಸಸ್ಯಗಳನ್ನು ಬೆಳೆಸಿದ್ದಾರೆ. ಕೃಷಿಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ.
ಫಕೀರಪ್ಪ ಆರ‍್ ಬರಕೆರ
ಕೊಪ್ಪಳ ಜಿಲ್ಲೆ
ವಯಸ್ಸು :
ಜಾತಿ : ಪರಿಶಿಷ್ಟ ವರ್ಗ
೧೦
ಮಾರುತಿ ನಿಂಗಪ್ಪ ಹೊಸಮನಿ
ಕಾಮನೂರು, ಕೊಪ್ಪಳ ಜಿಲ್ಲೆ
ವಯಸ್ಸು : ೨೫ ವರ್ಷ
ಜಾತಿ : ಪರಿಶಿಷ್ಟ ವರ್ಗ
ಮೂರು ಎಕರೆ ಒಣ ಬೂಮಿ ಹಾಗೂ ಮೂರು ಎಕರೆ ನೀರಾವರಿ ಭೂಮಿ ಹೊಂದಿದ್ದಾರೆ. ಮುಸುಕಿನಜೋಳ, ಜೋಳ, ನವಣೆ, ತರಕಾರಿ ಬೆಳೆಯುತ್ತಾರೆ.
೧೧
ದಾವಲ್ ಸಾಬ ಬಿ
ರಾಯಚೂರು ಜಿಲ್ಲೆ
ಜಾತಿ : ಮುಸ್ಲಿಂ
೧೨
ಜಯತಾನುಬಿ ನಡಪ
ಹುಲಕೋಟಿ ಗದಗ ಜಿಲ್ಲೆ
ವಯಸ್ಸು : ೩೮ ವರ್ಷ
ಜಾತಿ : ಪರಿಶಿಷ್ಟ ವರ್ಗ
ಕೃಷಿ ಕಾರ್ಮಿಕರು. ಒಂದಿಷ್ಟು ಆಡುಗಳನ್ನು ಸಾಕಿದ್ದಾರೆ.
೧೩
ಶಿವಗಂಗಮ್ಮ ಹೊಸಮನಿ
ಹರೇಕೊಪ್ಪ ಗದಗ ಜಿಲ್ಲೆ
ವಯಸ್ಸು : ೫೨ ವರ್ಷ
ಜಾತಿ :ಹಿಂದುಳಿದ ವರ್ಗ
ಆರು ಎಕರೆ ಮಳೆಯಾಶ್ರಿತ ಕೃಷಿ ಭೂಮಿ. ಈರುಳ್ಳಿ, ತೊಗರಿ, ಹೆಸರು, ಮುಸುಕಿನಜೋಳ ಮತ್ತು ಹತ್ತಿ ಇವರು ಬೆಳೆಯುವ ಬೆಳೆಗಳು. ಇವರದೊಂದು ಮಾದರಿ ಹೊಲ. ಇತ್ತೀಚಿನ ಪ್ರವಾಹದಲ್ಲಿ ಇವರ ಕೃಷಿಗೆ ಹಾನಿಯಾಗಿದೆ.
೧೪ ಶಾಂತಿಮೂಲೆ ಎಂ.ಟಿ
ಪೈಲಾರು, ದಕ್ಷಿಣ ಕನ್ನಡ
ವಯಸ್ಸು : ೬೬ ವರ್ಷ
ಸಣ್ಣ ಹಿಡುವಳಿಯ ಸಾವಯವ ಕೃಷಿಕ. ಸಂಶೋಧಕ ಗುಣದ ಶಾಂತಿಮೂಲೆ ಸತತ ಪ್ರಯೋಗ ನಿರತ. ತಮ್ಮ ತೋಟದ ಉತ್ಪನ್ನಗಳಿಗೆ ಮೌಲ್ಯ ವರ್ಧನೆ ಮಾಡುವಲ್ಲಿ ಪರಿಣಿತರು. ಜೇನು ಸಾಕಣೆಯಲ್ಲಿ ಪ್ರವೀಣರು. ಮಧು ಪ್ರಪಂಚ ಪತ್ರಿಕೆಯ ಸಂಪಾದಕರು
೧೫
ಹೊಯ್ಸಳ ಅಪ್ಪಾಜಿ
ಉಣ್ಣೇನಹಳ್ಳಿ, ಹಾಸನ ಜಿಲ್ಲೆ.
ವಯಸ್ಸು : ೩೫ ವರ್ಷ
ಜಾತಿ : ಸಾಮಾನ್ಯ ವರ್ಗ
ಎಂಟು ಎಕರೆ ನೀರಾವರಿ ಭೂಮಿಯಿದೆ. ಉತ್ತಮ ರೈತ. ಸ್ಥಳೀಯ ಭತ್ತ ತಳಿ ಸಂರಕ್ಷಣೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
೧೬
ಲಲಿತಾ ಭಟ್
ಮಾವಿನಸರ ಶಿವಮೊಗ್ಗ ಜಿಲ್ಲೆ
ವಯಸ್ಸು : ೪೮ ವರ್ಷ
ಜಾತಿ :
ಒಂದೂವರೆ ಎಕರೆ ಮಳೆಯಾಶ್ರೀತ ಭೂಮಿಯನ್ನು ಹೊಂದಿದ್ದಾರೆ. ಅಡಿಕೆ, ಮೆಣಸು, ಅರಶಿನ, ವೀಳ್ಯದೆಲೆ, ತರಕಾರಿ ಬೆಳೆಯುತ್ತಾರೆ. ಸಾವಯವ ಹಾಗೂ ಸಹಜ ಕೃಷಿ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ.
೧೭
ಗುರುಲಿಂಗಯ್ಯ
ಅಜ್ಜಂಪುರ ದಾವಣಗೆರೆ
ವಯಸ್ಸು : ೩೦ ವರ್ಷ
ಜಾತಿ : ಪರಿಶಿಷ್ಟ ಜಾತ
ಅತಿ ಸಣ್ಣ ರೈತರ ಬಗ್ಗೆ ಮಾತನಾಡಬಲ್ಲರು.
೧೮
ಚಿತ್ತಪ್ಪ,
ಗುಡ್ಡಗೊಲ್ಲರಹಳ್ಳಿ
ಚಿತ್ರದುರ್ಗ ಜಿಲ್ಲೆ
ವಯಸ್ಸು : ೫೩ ವರ್ಷ
ಜಾತಿ : ಪರಿಶಿಷ್ಟ ಜಾತಿ
ಏಳೂ ಎಕರೆ ಕೃಷಿ ಭೂಮಿಹೊಂದಿದ್ದಾರೆ. ಸುಮಾರು ನಾಲ್ಕು ಎಕರೆಗೆ ನೀರಾವರಿ ಇದೆ. ರಾಗಿ, ಭತ್ತ, ತರಕಾರಿ ಮುಖ್ಯಬೆಳೆಗಳು. ಒಣ ಭೂಮಿಯಲ್ಲಿ ಶೇಂಗಾ, ಸೂರ್ಯಕಾಂತಿ ಬೆಳೆಯುತ್ತಾರೆ. ನಿರಕ್ಷರಸ್ತರಾದರೂ ಅನೇಕ ಕೃಷಿ ಕಾರ್ಯಕ್ರಮಗಳಲ್ಲಿ ಭಗವಹಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಗೆ ಬದಲಾಗಿದ್ದಾರೆ.
೧೯
ಚಿಕ್ಕಬೋರೇಗೌಡ
ಸಾತನೂರು ಮಂಡ್ಯ ಜಿಲ್ಲೆ.
ವಯಸ್ಸು : ೫೧ ವರ್ಷ
ಜಾತಿ : ಹಿಂದುಳಿದ ವರ್ಗ
ಮೂರೂವರೆ ಎಕರೆ ಭೂಮಿಯಲ್ಲಿ ಕಬ್ಬು, ಬತ್ತ, ರಾಗಿ, ತೆಂಗು ಬೆಳೆಯುತ್ತಾರೆ. ಸಹಜ ಹಾಗೂ ಸಾವಯವ ಕೃಷಿ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ.
೨೦
ಲಲಿತವ್ವ, ಕಲ್ಲಾಪುರ
ಹಾವೇರಿ ಜಿಲ್ಲೆ
ವಯಸ್ಸು : ೬೧ ವರ್ಷ
ಮೂರು ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಹತ್ತಿ, ಜೋಳ, ರಾಗಿ, ಹುರಳಿ ಬೆಳೆಯುತ್ತಾರೆ.
೨೧
ಹೊಂಬಯ್ಯ
ಸೋಮನಹಳ್ಳಿ,
ಮೈಸೂರು ಜಿಲ್ಲೆ.
ವಯಸ್ಸು : ೪೫ ವರ್ಷ
ಜಾತಿ : ಪರಿಶಿಷ್ಟ ಜಾತಿ
ನಾಲ್ಕು ಎಕರೆ ಒಣ ಕೃಷಿ ಭೂಮಿ ಹೊಂದಿದ್ದಾರೆ. ಸಾವಯವ ಕೃಷಿ ತತ್ವಗಳನ್ನಾಧರಿಸಿ ರಾಗಿ, ಮೆಣಸಿನಕಾಯಿ, ತರಕಾರಿ ಬೆಳೆಯುತ್ತಾರೆ. ಅವಿಭಕ್ತ ಕುಟುಂಬ. ಒಂದಿಷ್ಟು ಕೋಳಿಗಳನ್ನು ಸಾಕಿದ್ದಾರೆ.
೨೨
ಸಿದ್ಧರಾಜಪ್ಪ
ಕಗ್ಗಲೂರು ಮೈಸೂರು ಜಿಲ್ಲೆ
ವಯಸ್ಸು : ೪೬ ವರ್ಷ
ಜಾತಿ : ಲಿಂಗಾಯಿತ
ಮೂರು ಎಕರೆ ಮಳೆಯಾಶ್ರಿತ ಒಣ ಭೂಮಿಯಲ್ಲಿ ಹುರಳಿ, ಭತ್ತ, ತೆಂಗು, ಮಾವು, ತರಕಾರಿ ಬೆಳೆಯುತ್ತಾರೆ. ರೈತ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
೨೩
ಕಲ್ಲವ್ವ ಹಕಲದ
ಕಂಪ್ಲಿಕೊಪ್ಪ ಧಾರವಾಡ
ವಯಸ್ಸು : ೫೫ ವರ್ಷ
ಜಾತಿ : ಹಿಂದುಳಿದ ವರ್ಗ
ಮಳೆ ನೀರು ಹಾಗೂ ತೆರೆದ ಬಾವಿಯ ನೀರು ಬಳಸಿ ಬೆಳೆ ಬೆಳೆಯುತ್ತಾರೆ. ಜೋಳ ಅಲಸಂದೆ, ಉದ್ದು, ತರಕಾರಿ ಹಾಗೂ ಕೆಲವು ಹಣ್ಣಿನ ಮರಗಳನ್ನು ಬೆಳೆಸಿದ್ದಾರೆ.
೨೪
ಮುನಿಯಮ್ಮ
ಗಂಗಮ್ಮನ ಹಳ್ಳಿ ಬಳ್ಳಾರಿ ಜಿಲ್ಲೆ
ವಯಸ್ಸು : ೫೨ ವರ್ಷ
ಜಾತಿ : ಹಿಂದುಳಿದ ವರ್ಗ
ಎರಡು ಎಕರೆ ಒಣ ಭೂಮಿ ಹಾಗೂ ಒಂದು ಎಕರೆ ನೀರಾವರಿ ಭೂಮಿಯಿದೆ. ರಾಗಿ, ಭತ್ತ, ತರಕಾರಿಗಳನ್ನು ಸಾವಯವದಲ್ಲಿ ಬೆಳೆಯುತ್ತಾರೆ. ಹೈನುಗಾರಿಕೆಯೂ ಇದೆ.
೨೫
ಅಜ್ಜಪ್ಪ ತಳ್ವಾರ
ರಾಮನಾಯಕನಹಳ್ಳಿ, ಬಳ್ಳಾರಿ ಜಿಲ್ಲೆ.
ವಯಸ್ಸು : ೨೫ ವರ್ಷ
ಜಾತಿ : ಪರಿಶಿಷ್ಟ ವರ್ಗ
ಎರಡೂವರೆ ಎಕರೆ ಕೃಷಿಭೂಮಿಯಲ್ಲಿ ಒಂದೂವರೆ ಎಕರೆಗೆ ನೀರಾವರಿ ವ್ಯವಸ್ಥೆಯಿದೆ. ವಿವಿಧ ಬಗೆಯ ಮುಸುಕಿನಜೋಳ, ತೋಗರಿ ಬೆಳೆಯುತ್ತಾರೆ. ಪ್ರವಾಹ / ಬರಗಾಲದಿಂದ ಸದಾ ತೊಂದರೆಗೆ ಒಳಗಾಗುತ್ತಿದ್ದಾರೆ.
೨೬
ಹೇಮವ್ವ ಲಮಾಣಿ
ಕಾಕೋಳ ತಾಂಡ ಹಾವೇರಿ ಜಿಲ್ಲೆ
ವಯಸ್ಸು : ೫೬ ವರ್ಷ
ಜಾತಿ : ಪರಿಶಿಷ್ಟ ವರ್ಗ
ಎರಡೂವರೆ ಎಕರೆಯಲ್ಲಿ ಮುಸುಕಿನ ಜೋಳ, ಬೇಳೆ ಕಾಳುಗಳು, ಹತ್ತಿ ಬೇಳೆಯುತ್ತಾರೆ ಇತ್ತೀಚಿನ ಪ್ರವಾಹದಿಂದಾಗಿ ತೊಂದರೆಗೆ ಒಳಗಾಗಿದ್ದಾರೆ. ತಾಂಡದ ಪ್ರಗತಿಪರ ಮಹಿಳೆ.
೨೭
ಶಿವಮ್ಮ
ಆಲನಹಟ್ಟಿ ರಾಮನಗರ ಜಿಲ್ಲೆ
ವಯಸ್ಸು : ೫೦ ವರ್ಷ
ಜಾತಿ : ಪರಿಶಿಷ್ಟ ಜಾತಿ
ನಾಲ್ಕೂವರೆ ಎಕರೆ ಒಣ ಕೃಷಿ ಭೂಮಿ ಹೊಂದಿದ್ದಾರೆ. ಸ್ವಲ್ಪ ಪ್ರದೇಶಕ್ಕೆ ನೀರಾವರಿ ಇದೆ. ರಾಗಿ, ಶೇಂಗಾ, ತೆಂಗು, ತರಕಾರಿ ಬೆಳೆಯುತ್ತಾರೆ. ರೇಷ್ಮೆ ಸಾಕಾಣಿಕೆಯನ್ನೂ ಮಾಡುತ್ತಾರೆ.
೨೮
ಗಂಗಮ್ಮ ಪುಟ್ಟರಸಯ್ಯ
ಲಕ್ಕಸಂದ್ರ, ರಾಮನಗರ ಜಿಲ್ಲೆ.
ವಯಸ್ಸು : ೫೦ ವರ್ಷ
ಜಾತಿ : ಪರಿಶಿಷ್ಟ ಜಾತಿ
ಎರಡು ಎಕರೆ ಕೃಷಿ ಭೂಮಿಯಿದೆ. ಬಾಳೆ, ರಾಗಿ, ತರಕಾರಿ ಬೆಳೆಯುತ್ತಾರೆ.
೨೯
ಲಕ್ಷ್ಮಿ ಸಿದ್ದಿ
ಶಿರಗಾಂ ಉತರ ಕನ್ನಡ
ವಯಸ್ಸು : ೪೨ ವರ್ಷ
ಜಾತಿ : ಪರಿಶಿಷ್ಟ ವರ್ಗ
ಒಂದು ಎಕರೆ ಭೂಮಿಯಲ್ಲಿ ಸಾವಯವ ಕೃಷಿಯಂತೆ ಭತ್ತ, ತೆಂಗು ಬೆಳೆಯುತ್ತಾರೆ.
೩೦
ಹಚ್ಚೇಗೌಡ
ಬಿಳೀಗಿರಿ ರಂಗನ ಬೆಟ್ಟ,
ಚಾಮರಾಜ ನಗರ ಜಿಲ್ಲೆ
ವಯಸ್ಸು : ೫೦ ವರ್ಷ
ಜಾತಿ :
ಮಳೆಯಾಶ್ರಿತ ಕೃಷಿ ಮಾಡುತ್ತಿದ್ದಾರೆ. ಬಾಳೆ, ಕಾಫಿ, ಬೆಳೆಯುತ್ತಾರೆ. ದೇಸೀ ತಳಿ ಬೀಜಗಳ ಸಂಗ್ರಹಣೆಯಲ್ಲಿ ತೊಡಗಿದ್ದಾರೆ.
       
ನ್ಯಾಯ ಮಂಡಲಿ- ಜಾತಿ ಮತ್ತು ಲಿಂಗವಾರು ಸಂಕ್ಷಿಪ್ತ ಕೊಷ್ಟಕ
ಜಾತಿ
ಹೆಂಗಸು
ಗಂಡಸು
ಒಟ್ಟು
ಮುಸ್ಲಿಂ
-
ಪರಿಶಿಷ್ಟಜಾತಿ/ವರ್ಗ
೧೬
ಹಿಂದುಳಿದ ವರ್ಗ
ಸಾಮಾನ್ಯ ವರ್ಗ
ಒಟ್ಟು
೧೫
೧೫
೩೦
ವಾದಿಗಳು / ಸಾಕ್ಷಿಗಳು

ನಾಗರೀಕ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕೃಷಿ ಸಂಶೋಧನೆಯಲ್ಲಿ ತೊಡಗಿರುವವರು ನ್ಯಾಯ ಮಂಡಳಿಯ ಮುಂದೆ ತಮ್ಮ ವಾದವನ್ನು ಮಂಡಿಸುತ್ತಾರೆ. ಅವರು ಸರ್ಕಾರಿ ಇಲಾಖೆಗಳ ಪ್ರತಿನಿಧಿಗಳು, ಕೃಷಿ ವಿಶ್ವವಿದ್ಯಾನಿಲಯದವರು, ರೈತ ಸಂಘಟನೆಯವರು, ಗ್ರಾಹಕ ಸಂಘಟನೆಯವರು, ಅಧಿಕಾರಿಗಳು ಆಗಿರಬಹುದು. ರೈತ ನ್ಯಾಯ ಮಂಡಳಿಯ ಮುಂದೆ ಕೃಷಿ ಸಂಶೋಧನೆಗೆ ಸಂಬಂಧಿಸಿದ ವಿಚಾರಗಳನ್ನು ಮಂಡಿಸಿ ಅದರ ಪ್ರಸ್ತುತತೆಯನ್ನು ನ್ಯಾಯ ಮಂಡಳಿಗೆ ಅರಿವು ಮಾಡಿಕೊಡುವುದು ಇವರ ಪ್ರಮುಖ ಪಾತ್ರವಾಗಿದೆ.

ಈ ವಾದಿಗಳು ತಮ್ಮ ಕ್ಷೇತ್ರದಲ್ಲಿ ಕೃಷಿ ಸಂಶೋಧನೆಗೆ ಸಂಬಂಧಿಸಿದಂತೆ ಮಾಡಿರುವ ಕೆಲಸದ ಪರವಾಗಿ ವಾದಿಸುತ್ತಾರೆ. ಅವರ ವಾದಗಳನ್ನು ಆಲಿಸಿದ ಮೇಲೆ ಸ್ಪಷ್ಟನೆಗಳನ್ನು ಪಡೆದು, ವಿಷಯದ ಬಗ್ಗೆ ಚರ್ಚಿಸಿ ನ್ಯಾಯ ಮಂಡಳಿ ತನ್ನ ತೀರ್ಮಾನವನ್ನು ಕೊಡುತ್ತದೆ.

ಆಸಕ್ತರು
ಕೃಷಿ ಅಭಿವೃದ್ಧಿ ಪ್ರಕ್ರಿಯೆಗೆ ಆರ್ಥಿಕ ನೆರವು ನೀಡುತ್ತಿರುವ ಮತ್ತು ಕೃಷಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳ ಪ್ರತಿನಿಧಿಗಳಿಗೆ ಈ ತೀರ್ಮಾನದ ಪ್ರಕ್ರಿಯೆಯಲ್ಲಿ ಆಸಕ್ತಿ ಇರುವುದರಿಂದ ವಿಶ್ವಬ್ಯಾಂಕ್‌, ಎಫ್‌.ಎ.ಒ. ಮುಂತಾದ ಸಂಸ್ಥೆಗಳ ಪ್ರತಿನಿಧಿಗಳು ವೀಕ್ಷಕರಾಗಿ ಭಾಗವಹಿಸುತ್ತಾರೆ.